• Tue. Jul 23rd, 2024

ಆರ್ಥಿಕ ದಿವಾಳಿಯಾದ ಶ್ರೀಲಂಕಾ

Byadmin

Jul 17, 2022ಜಗತ್ತಿನ ಯಾವುದೇ ಒಂದು ರಾಷ್ಟ್ರ ನಿಸ್ವಾರ್ಥಿ ನಿಷ್ಪಕ್ಷಪಾತಿ ಜನಪರ ಮತ್ತು ಸದೃಢ ಮುಖಂಡತ್ವವನ್ನು ಹೊಂದಿಲ್ಲದಿದ್ದರೆ ,ಆ ರಾಷ್ಟ್ರ ಯಾವ ರೀತಿ ಹಾನಿ ಅನುಭವಿಸುತ್ತೆ ಎಂಬುದನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ನಾವು ನೋಡಬಹುದಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದ್ದು ದೇಶದ ರಾಷ್ಟ್ರಪತಿ ದೇಶದಿಂದ ಪಲಾಯನ ಮಾಡಿ ಸಿಂಗಾಪುರದಲ್ಲಿ ರಾಜಕೀಯ ಆಶ್ರಯವನ್ನು ಪಡೆದುಕೊಂಡಿದ್ದಾನೆ.ಇತ್ತ ಶ್ರೀಲಂಕಾದಲ್ಲಿ ಸಾವಿರಾರು ಜನ ಬೀದಿಗಿಳಿದು ಪ್ರತಿಭಟನೆಯನ್ನು ಮಾಡಿದ್ದಲ್ಲದೆ ಅಧ್ಯಕ್ಷರ ನಿವಾಸವನ್ನು ಮುತ್ತಿಗೆ ಹಾಕಿ ವಶಪಡಿಸಿಕೊಂಡು ಈಜುಕೊಳ ಅಡುಗೆಮನೆ ಹೀಗೆ ಎಲ್ಲ ಕಡೆ ಜನ ತುಂಬಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ದೋಚಿ ಈಜುಕೊಳದಲ್ಲಿ ಈಜಾಡಿ, ತಮಗೆ ಇಷ್ಟ ಬಂದ ರೀತಿ ವರ್ತಿಸಿದ್ದನ್ನು ನೋಡಿದರೆ ಅಧ್ಯಕ್ಷರ ಮೇಲೆ ಜನರ ಸಿಟ್ಟು ಯಾವ ಮಟ್ಟಕ್ಕಿದೆ ಎಂದು ತಿಳಿದು ಬರುತ್ತದೆ. ಶ್ರೀಲಂಕದಲ್ಲಿ ಈ ಪರಿಸ್ಥಿತಿಗೆ ಮುಖ್ಯ ಕಾರಣ ಅತಿಯಾದ ಬೆಲೆ ಏರಿಕೆ ಆಹಾರ ವಸ್ತುಗಳ ಕೊರತೆ ಇಂಧನಗಳ ಕೊರತೆ ಜೊತೆಗೆ ಶ್ರೀಲಂಕಾ ಸರ್ಕಾರ ಪಡೆದುಕೊಂಡಿರುವ ಅಂತರಾಷ್ಟ್ರೀಯ ಸಾಲ.

ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಅಧ: ಪತನಕ್ಕೆ ಇಳಿಯಲು ಅಲ್ಲಿನ ಸರಕಾರದ ನೀತಿಗಳೇ ಕಾರಣವಾಗಿದೆ. ಶ್ರೀಲಂಕಾದ ಆರ್ಥಿಕತೆ ಮುಖ್ಯವಾಗಿ ಪ್ರವಾಸೋದ್ಯಮ, ಬಟ್ಟೆ ,ಮಸಾಲೆ ಮತ್ತು ಟೀ ಅಂತಹ ವಸ್ತುಗಳ ರಫ್ತು ಮೇಲೆ ಅವಲಂಬಿತವಾಗಿದೆ. ಇದಲ್ಲದೆ ಸಾಕಷ್ಟು ಕೃಷಿ ಉತ್ಪನ್ನಗಳು ಆಹಾರ ಪದಾರ್ಥಗಳನ್ನು ಉತ್ಪಾದಿಸುವ ಶ್ರೀಲಂಕಾ ತನ್ನ ಜನರ ಬೇಡಿಕೆಯನ್ನು ಪೂರೈಸಿ ಮಿಕ್ಕಿದ್ದನ್ನು ರಫ್ತು ಮಾಡುತ್ತದೆ. ಇನ್ನು ಶ್ರೀಲಂಕಾದ ಇವತ್ತಿನ ಸಮಸ್ಯೆ 2019 ರಿಂದ ಪ್ರಾರಂಭವಾಗಿದ್ದು ಇವತ್ತಿನ ಮಟ್ಟಕ್ಕೆ ಸಮಸ್ಯೆ ಉಲ್ಬಣಗೊಳ್ಳಲು 2019 ರಲ್ಲಿ ನಡೆದ ಚರ್ಚ್ ಸ್ಪೋಟ, ಕೋವಿಡ್ 19 ಸಮಸ್ಯೆ ಜೊತೆಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹೆಚ್ಚೆಚ್ಚು ಹಣವನ್ನು ಮುದ್ರಿಸಿದ್ದು ಕಾರಣವಾಗಿದೆ.

ಇನ್ನು ಹೊರಗಿನ ದೇಶಗಳಿಂದ ಪಡೆದ ಸಾಲ ಅದರಲ್ಲಿ ಮುಖ್ಯವಾಗಿ ಚೀನಾದಿಂದ ಪಡೆದ ಸಾಲವನ್ನು ಮರುಪಾವತಿಸುವ ಕುರಿತು ಸರಿಯಾದ ಕ್ರಮವನ್ನು ಕೈಗೊಳ್ಳದೆ ಸಾಲವನ್ನು ಮರುಪಾವತಿಸಲು ಮತ್ತಷ್ಟು ಸಾಲವನ್ನು ಪಡೆಯುವ ಕ್ರಮಗಳಿಂದಾಗಿ ಸಾಲದ ಸುಳಿಯಲ್ಲಿ ಶ್ರೀಲಂಕಾ ಸಿಕ್ಕಿಕೊಂಡಿದೆ.
ಅಲ್ಲದೆ ರಾಸಾಯನಿಕ ಗೊಬ್ಬರ ಆಧಾರಿತ ಕೃಷಿ ನೀತಿಯನ್ನು ಬದಲಾವಣೆ ಮಾಡಿ ಸಾವಯವ ಕೃಷಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೃಷಿ ಸಮುದಾಯಕ್ಕೆ ಆದೇಶವನ್ನು ಹೊರಡಿಸಿದ್ದರಿಂದ ಆಹಾರ ಧಾನ್ಯಗಳ ಇಳುವರಿ ಕಡಿಮೆಯಾಗಿ ಆಹಾರ ಕೊರತೆ ಉಂಟಾಗತೊಡಗಿತು. ಇನ್ನು ಚರ್ಚ್ ಸ್ಫೋಟ ಹಾಗೂ ಕೋವಿಡ್ 19 ಸಾಂಕ್ರಾಮಿಕದಿಂದ ಪ್ರವಾಸ ಉದ್ಯಮವು ಸಹ ನಷ್ಟದ ಸುಳಿಗೆ ಸಿಲುಕಿತು. ಈ ಸಮಸ್ಯೆಯನ್ನು ಅವಲೋಕನ ಮಾಡುವಲ್ಲಿ ಎಡವಿದ ಸರ್ಕಾರ ಹೆಚ್ಚೆಚ್ಚು ಶ್ರೀಲಂಕಾದ ಹಣವನ್ನು ಮುದ್ರಿಸ ತೊಡಗಿತು. ಇದರಿಂದ ಶ್ರೀಲಂಕಾದ ರೂಪಾಯಿ ಮೌಲ್ಯ ಕಳೆದುಕೊಂಡು ಡಾಲರ್ ಎದುರು 335 ರೂಪಾಯಿ ತಲುಪಿತು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಸರಕಾರ ಅವಶ್ಯಕತೆ ಇಲ್ಲದ ಯೋಜನೆಗಳನ್ನು ಅಂತರಾಷ್ಟ್ರೀಯ ಸಾಲದ ಅಡಿಯಲ್ಲಿ ಜಾರಿಗೆ ತಂದಿತು. ಮುಖ್ಯವಾಗಿ ಚೀನಾದ ಸಹಾಯದಿಂದ ಒಂದು ಬಂದರನ್ನು ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಿತು.

ಆದರೆ ಎರಡು ಯೋಜನೆಗಳು ಶ್ರೀಲಂಕಾಗೆ ಲಾಭದಾಯಕವಾಗಿರದೆ ನಷ್ಟವನ್ನು ಅನುಭವಿಸಲು ಪ್ರಾರಂಭಿಸಿದವು. ಕೃಷಿ ಉತ್ಪನ್ನಗಳ ಉತ್ಪಾದಕತೆ ಕಡಿಮೆಯಾಯಿತು. ಮತ್ತೊಂದೆಡೆ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದ ಪ್ರವಾಸೋದ್ಯಮ ಹೊಡೆತಕ್ಕೆ ಒಳಗಾಗಿ ದೇಶದ ಅಮೂಲ್ಯವಾದ ವಿದೇಶಿ ವಿನಿಮಯ ಕರಗಲು ಪ್ರಾರಂಭವಾಯಿತು. ಇಷ್ಟಾದರೂ ಶ್ರೀಲಂಕಾದ ಪ್ರಧಾನ ಮಂತ್ರಿ ಮಹೀಂದರಾಜ ಪಕ್ಷ ಯಾವುದೇ ರೀತಿಯಾದ ಆರ್ಥಿಕ ಸಮಸ್ಯೆಯನ್ನು ಅಲ್ಲಗಳೆದು ಮಾಧ್ಯಮಗಳು ಇಲ್ಲ ಸಲ್ಲದ ಸುದ್ದಿಯನ್ನು ಹರಡುತ್ತಿವೆ ಎಂದು ಆರೋಪಿಸಿದರು. ಆದರೆ ಸಮಸ್ಯೆ ಮತ್ತಷ್ಟು ಉಲ್ಬನವಾಗಿ ಇಂಧನ ಆಹಾರ ಮತ್ತು ಔಷಧಗಳ ಕೊರತೆ ಉಂಟಾಗಿ ದೇಶದಲ್ಲಿ ಬೇಡಿಕೆಗಾಗಿ
ಹಾಹಾಕಾರ ಉಂಟಾಗಲು ಪ್ರಾರಂಭವಾದಾಗ, ಪ್ರಧಾನ ಮಂತ್ರಿ ಮಹಿಂದ್ರ ರಾಜ್ಯ ಪಕ್ಷ ಸಮೇತ ಸಂಪೂರ್ಣ ಕ್ಯಾಬಿನೆಟ್ ರಾಜೀನಾಮೆ ನೀಡಿತು. ಆಗಲೇ ಜನರು ಅಗತ್ಯ ವಸ್ತುಗಳ ಕೊರತೆ ಮತ್ತು ಬೆಲೆ ಏರಿಕೆಯ ವಿರುದ್ಧ ಬೀದಿಗೆ ಇಳಿದು ಪ್ರತಿಭಟಸ ತೊಡಗಿದ್ದರು. ಮುಂದೆ ಶ್ರೀಲಂಕಾದ ಅಧ್ಯಕ್ಷರಾದ ಗೋಟ ಬಾಯ ವಿಪಕ್ಷದ ನಾಯಕರಾದ ರಾಯನಲ್ ವಿಕ್ರಮಸಿಂಘಿಯನ್ನು ಪ್ರಧಾನಮಂತ್ರಿಯಾಗಿ ಮಾಡಿದರು.

•ಗೋಟ ಬಾಯಆದರೂ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ದೇಶದಲ್ಲಿ ಅರಾಜಕತೆ ಉಂಟಾಗಿ ವಿದೇಶಕ್ಕೆ ಕೊಡುವ ಸಾಲ ಹಾಗೂ ಬಡ್ಡಿಯನ್ನು ಪಾವತಿಸಲಾಗದೆ ಶ್ರೀಲಂಕಾ ತನ್ನನ್ನು ತಾನೇ ದಿವಾಳಿ ಎಂದು ಘೋಷಿಸಿಕೊಂಡಿತು. ಇದರಿಂದ ಸಾವಿರಾರು ಜನ ರೊಚ್ಚಿಗೆದ್ದು ಪ್ರತಿಭಟನೆ ಆರಂಭಿಸಿ ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳೇ ನಿವಾಸದ ಮೇಲೆ ದಾಳಿ ಮಾಡಿ ಸಿಕ್ಕಸಿಕ್ಕ ವಸ್ತುಗಳನ್ನು ದೋಚುತೊಡಗಿದರು. ಪರಿಸ್ಥಿತಿ ಸಂಪೂರ್ಣನ ನಿಯಂತ್ರಣ ತಪ್ಪಿ ಅಧ್ಯಕ್ಷರಾದ ಗೋಟ ಬಾಯ ರಾಜ ಪಕ್ಷ ದೇಶ ಬಿಟ್ಟು ಪಾಲಾಯಣ ಮಾಡಿ ಸಿಂಗಾಪುರ್ ನಲ್ಲಿ ರಾಜಕೀಯ ಆಶ್ರಯವನ್ನು ಪಡೆದುಕೊಂಡರು. ಇನ್ನು ಪ್ರಧಾನ ಮಂತ್ರಿ ರಣಲ್
ವಿಕ್ರಮಸಿಂಗೇ ಸಹ ರಾಜೀನಾಮೆಯನ್ನು ಕೊಟ್ಟಿದ್ದು. ಸದ್ಯ ಇಡೀ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಅಂತರಾಷ್ಟ್ರೀಯ ಸಮುದಾಯ ಶ್ರೀಲಂಕಾದ ನೆರವಿಗೆ ಧಾವಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಬೀಗಡಾಯಿಸಿ, ಜನರು ದೇಶದಿಂದ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇನ್ನು ಸ್ಪಷ್ಟವಾಗಿ ಹೇಳುವುದಾದರೆ ಕುಟುಂಬ ರಾಜಕಾರಣ
ಸ್ವಜನ ಪಕ್ಷಪಾತ ಭ್ರಷ್ಟಾಚಾರಗಳು ಶ್ರೀಲಂಕವನ್ನು ದಿವಾಳಿತನಕ್ಕೆ ತಳ್ಳಿದ್ದರಲ್ಲಿ ಎರಡು ಮಾತಿಲ್ಲ. ಇನ್ನು ಆರ್ಥಿಕ ಸಹಾಯಕ್ಕಾಗಿ ಶ್ರೀಲಂಕಾ ಸರಕಾರ ನೆಚ್ಚಿಕೊಂಡಿದ್ದ ಚೀನಾ ಸಹ ಸಹಾಯ ಮಾಡಲು ಹಿಂದೇಟು ಹಾಕಿದ್ದರಿಂದ ವಿಧಿ ಇಲ್ಲದೆ ಭಾರತದ ನೆರವನ್ನು ಶ್ರೀಲಂಕಾ ಸರ್ಕಾರ ಕೇಳಿತು ಭಾರತ ಸರ್ಕಾರ ತನ್ನ ಕೈಲಾದಷ್ಟು ಇಂಧನ ಮತ್ತು ಔಷಧಿಗಳ ಜೊತೆಗೆ ಹಣದ ಸಹಾಯವನ್ನು ಮಾಡಿತು. ಆದರೆ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ತರ ಆಗಿಹೋಯಿತು.

ಇಲ್ಲಿ ಇನ್ನೊಂದು ಮುಖ್ಯವಾದ ಗಮನಿಸಬೇಕಾದ ವಿಚಾರವೇನೆಂದರೆ ಚೀನಾ ದೇಶದಿಂದ ಸಾಲ ಪಡೆದುಕೊಂಡ ರಾಷ್ಟ್ರಗಳು ಇದೇ ರೀತಿ ಆರ್ಥಿಕ ದಿವಾಳಿತನಕ್ಕೆ ಬಲಿಯಾಗುತ್ತಲಿದ್ದು ಇನ್ನು ಬಹುಷ: ಮುಂದಿನ ಸರದಿ ಪಾಕಿಸ್ತಾನದಾಗಲಿದೆ. ಪಾಕಿಸ್ತಾನವು ಸಹ ಈಗಾಗಲೇ ಹಣಕಾಸು ಕೊರತೆ ಹಾಗೂ ವಿದೇಶ ವಿನಿಮಯ ಕೊರತೆಯಿಂದ ಬಳಲುತ್ತಲಿದ್ದು ಸಾಕಷ್ಟು ಸಾಲವನ್ನು ಮರುಪಾವತಿ ಮಾಡಬೇಕಾಗಿದ್ದು ಅಂತರಾಷ್ಟ್ರೀಯ ಹಣಕಾಸು ನಿಧಿಯ ಮೊರೆ ಹೋದರು ಸಹ ಪಾಕಿಸ್ತಾನದ ಭಯೋತ್ಪಾದಕ ನೀತಿಗಳಿಂದಾಗಿ ಆರ್ಥಿಕ ಸಹಾಯ ಸಿಗುವುದು ದುರ್ಲಭವಾಗಲಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾದ ಇವತ್ತಿನ ಪರಿಸ್ಥಿತಿಗಳು ಏಷ್ಯಾದ ಚಿಕ್ಕ ಚಿಕ್ಕ ರಾಷ್ಟ್ರಗಳಿಗೆ ಒಂದು ಪಾಠವಾಗಲಿ ಎಂದು ಆಶಿಸೋಣ.

ಶಿವಕುಮಾರ ಮಠ ✍️

Leave a Reply

Your email address will not be published. Required fields are marked *