• Tue. Jul 23rd, 2024

ತನಿಖೆಯ ರೋಚಕ ಬದುಕು ಹೋರಾಟ

Byadmin

Aug 7, 2022

ಕಳೆದ ಸಂಚಿಕೆ ಮುಂದುವರಿದ ಭಾಗ..

ಮೂರನೆಯ ಸಂಚಿಕೆ:

ಕಾಯಿ ಚೂರು ಅಂತ ಶಾಲೆಯ ಸ್ನೇಹಿತರು ರೇಗಿಸಲು ಮುಖ್ಯ ಕಾರಣ ಮನೆಯಲ್ಲಿ ಶಾಲೆ ಬಿಡಿಸಿ ಕಾಯಿ ಚೂರು ಮಾರಲು ಅಂಗಡಿಯಲ್ಲಿ ಬಿಡುತ್ತಿದ್ದರು.ಅದನ್ನು ನಿತ್ಯ ಗಮನಿಸುತ್ತಿದ್ದ ಅದೇ ದಾರಿಯಲ್ಲಿ ಶಾಲೆಗೆ ಹೋಗುತ್ತಿದ್ದ ತನ್ನ ವಯಸ್ಸಿನ ಉಳಿದ ಸ್ನೇಹಿತರ ಕಣ್ಣಿಗೆ ಬಿದ್ದು ,ಬಾಲ್ಯದಲ್ಲಿ ಎಲ್ಲರ ಬಾಯಿಗೆ ಶಿವಕುಮಾರ್ ಅವರು ತಮಾಷೆಯ ವಸ್ತುವಾದರು.ಇನ್ನು ಯಜಮಾನ (ಮನೆಯವರ) ಪಾಲಿಗೆ ತಿನ್ನುವ ಊಟಕ್ಕೆ ದುಡಿಮೆಯ ಬೆವರು ಋಣ ತೀರಿಸುತಿತ್ತು.

ಇವೆಲ್ಲದರ ಮಧ್ಯೆ ಪಠ್ಯ ಪುಸ್ತಕಗಳಲ್ಲಿನ ವಿಷಯಗಳು ಒಮ್ಮೆ ಓದಿದ್ರೆ ಸಾಕು ಶಿವಕುಮಾರ್ ಅವರಿಗೆ ಕಂಠ ಪಾಠವಾಗೋದು ಪರೀಕ್ಷೆಯ ಹಿಂದಿನ ದಿನ ಕಣ್ಣಾಡಿಸಿದರೆ ಸಾಕು ಓದಿದ ಪಾಠ ಉತ್ತರ ಪತ್ರಿಕೆಯಲ್ಲಿ ಅಚ್ಚು.


ಅವರ ಬದುಕಿನ ಪಯಣ ಅವರ ಮಾತುಗಳಲ್ಲೆ ಕೇಳಿ.

ಬೆಳಗ್ಗೆ ಐದು ಗಂಟೆಗೆ ಅಂಗಡಿ ತೆರೆದರೆ ರಾತ್ರಿ 10 ಗಂಟೆಯವರೆಗೂ ಅಲ್ಲೆ ಇರಬೇಕಿತ್ತು. ಮನೆಗೆ ಬರುವ ಹೊತ್ತಿಗೆ ಉಳಿದಿದ್ದ ತೆಂಗಿನ ಕಾಯಿಗಳನ್ನ ಒಳಗೆ ತೆಗೆದಿಟ್ಟು ಬಾಗಿಲು ಹಾಕಿ ಕೊನೆಗೆ ಹೋಗುತ್ತಿದ್ದೆ.
ಮತ್ತೆ ಮಾರನೆಯ ದಿನ ಅದೇ ವೇಳಾಪಟ್ಟಿ.
ಒಪ್ಪತ್ತಿನ ಊಟವಷ್ಟೆ ಜೀವಕ್ಕೆ ಗಟ್ಟಿ.
ಬಾಲ್ಯದಲ್ಲಿಯೆ ನನ್ನೊಳಗೆ ಓದಬೇಕೆಂಬ ಹಂಬಲವಿತ್ತು. ಅದು ಪೊಲೀಸ್ ಅಧಿಕಾರಿಯಾಗಬೇಕೆಂಬ ಮಹದಾಸೆ ತುಂಬಿಕೊಂಡಿದ್ದೆ.

ಓದಿಸುವೆ ಎನ್ನುವ ಆಸೆ ತುಂಬಿ ಬೆಂಗಳೂರಿಗೆ ಕರೆದೋಯ್ದ ಯಜಮಾನ. ನನ್ನನ್ನು ಮನೆಯ ಜೀತದಾಳಿನಂತೆ ದುಡಿಸಿಕೊಂಡ.ನಾನಿದ್ದ ಮನೆಯಲ್ಲಿ ಆಗ ಬಾವಿ ಇತ್ತು. ದಿನ ಬಾವಿಯಲ್ಲಿ ನೀರು ಸೇದಿ ತರಬೇಕಿತ್ತು.ಬಾವಿಯೊಳಗೆ ಬಕೀಟು ಇಳೆ ಬಿಟ್ಟಾಗ ಅರ್ಧ ತುಂಬಿದರಷ್ಟೆ ಬದುಕಿತು ನನ್ನ ಜೀವ, ಅರ್ಧ ತುಂಬಲೆಂದು ಪ್ರಾರ್ಥಿಸಿ ಕೊಳ್ಳುತ್ತಿದ್ದೆ. ನನ್ನ ಗ್ರಹಚಾರವೊ ಏನೋ ಒಳಗೆ ಹಾಕಿದ ಕೂಡಲೆ ಪೂರ್ತಿ ತುಂಬಿ ಹೋಗೋದು.
ಒಂದು ದಿನವಂತು ಬೇಡ..

ಮುಂದುವರಿಯುವುದು











Leave a Reply

Your email address will not be published. Required fields are marked *