• Mon. Oct 21st, 2024

ಮೈ ಮುಟ್ಟಿಸಿಕೊಳ್ಳದೆ ಹೊರ ಬಂದೆ

Byadmin

Jul 3, 2022



ಹೇಗೆ ಸಾಧ್ಯ? ಹೀಗೂ ಸಾಧ್ಯವೆ? ನಿಮ್ಮನ್ನು ಬೆಚ್ಚುವಂತೆ ಮಾಡಿ ಯೋಚನೆಗೆ ತಳ್ಳುವಂತೆ ಮಾಡುವ ಸಂಗತಿ ಇದು.

ಅದೊಂದಿನ ಬಹಳ ದೂರದಿಂದ ಕಛೇರಿಗೆ ಬಂದೆ.ನನ್ನನ್ನು ಹಸಿವಿನಿಂದ ಮುಕ್ತಿ ಹೊಂದಲು ಬರಮಾಡಿಕೊಂಡರು.ಕಾದ ಜೀವ ಹಸಿದಿತ್ತು.
ಹಸಿದ ಮೇಲೆ ನನ್ನ ಬಿಡುವ ಮಾತೆಲ್ಲಿ..ಬಾಯಿ ಸವರುತ್ತ ನನ್ನ ಹಿಡಿದಾಗ ಬೇಗ ಅವರ ಇಷ್ಟಾರ್ಥಕ್ಕೆ ಸೋತು ಜೊತೆಯಾದೆ.ಕೆಲ ಹೊತ್ತು ಅವರೊಳಗೆ ಸೇರಿದೆ.ಪ್ರತಿ ಬೀದಿಗಳಲ್ಲಿ ಸುತ್ತಾಡುವ ನನಗೆ ಪ್ರತ್ಯೇಕ ನಿಲುಗಡೆ ಇಲ್ಲ..


ಹುಟ್ಟಿದೆಲ್ಲೊ ಸೇರುವ ಜಾಗವೆಲ್ಲೊ?
ಬದುಕೆ ಹೀಗೆ ಅಲ್ಪ ಎಂದುಕೊಂಡರು ತೃಪ್ತಿ ಕೊಡುವೆ.
ಹೊರ ಬಂದ ನಾನು ಸಿಕ್ಕಿದ್ದು ಮತ್ಯಾರಿಗೊ..ಹುಟ್ಟಿದ ಗೂಡೂ ಬೇಗನೆ ಬಿಡುವೆ..ನನಗಾಗಿ ಅಲ್ಲ ಮತ್ತೊಬರ ಆಸೆ ತಣಿಸಲು.ಹೊತ್ತು ಮುಳುಗುವುದೆಲ್ಲ ನನಗೆ ತಿಳಿಯದು.ನನ್ನ ಬೇಗ ಬಳಸಿಕೊಳ್ಳಬೇಕೆಂಬ ಹಣೆ ಪಟ್ಟಿ ಹೊತ್ತಿರುವೆ.ನನ್ನ ಮೈ ಬಿಸಿ ಇದ್ದಾಗಲೆ.ಕೈ ಇಟ್ಟರೆ ತಣ್ಣಗಾಗುವೆ.ಎಲ್ಲವು ಕೆಲ ನಿಮಿಷಗಳಷ್ಟೆ.

ಇಷ್ಟೆಲ್ಲ ಹೇಳಿದ ಮೇಲೆಯೂ ನನಗಿಟ್ಟಿರುವ ಹೆಸರು ಹೇಳದಿದ್ದರೆ ಹೇಗೆ? ಹೊರ ದೇಶದಿಂದ ಭಾರತಕ್ಕೆ ಲಗ್ಗೆ ಇಟ್ಟು ಎಷ್ಟೋ ವರ್ಷಗಳಾಗಿವೆ ಪ್ರತಿ ಗಲ್ಲಿಯಲ್ಲಿಯು ಬೆನ್ನಿಗೆ ಬಿದ್ದು ಸುತ್ತಾಡುವೆ..ನನ್ನ ನೆನಪಿಸಿಕೊಂಡು ಮತ್ತೆ ಬಾಯಿ ಚಪ್ಪರಿಸಬೇಡಿ..ನಾನೆ ಪಿಝಾ.

ನಾನು ಕೈಯಿಂದ ಮುಟ್ಟಿಸಿಕೊಳ್ಳದೆ ಹೊರ ಬಂದೆ ಎಂದು ನನ್ನ ಮೇಲೆ ಬರೆದಿದ್ದಾರೆ..ಅದನ್ನು ಕಂಡು ನನ್ನೊಳಗೆ ನಗುವೆ..ನನ್ನ ಮುಟ್ಟದೆ ತಿನ್ನಲು ಅಸಾಧ್ಯ.
ಆಧುನಿಕ ಯುಗದಲ್ಲಿ ನನ್ನ ಹೇಗೆ ಬೇಕು ಹಾಗೆ ಬಳಸಿಕೊಳ್ಳುತ್ತಾರೆ..ಮತ್ತೆ ನನ್ನ ಬಗ್ಗೆ ಓದುವಾಗ ನೀವು ನಗಬೇಡಿ ..ಹೊರ ಬಂದ ನಾನು ನಿಮ್ಮ ಮನೆಗೂ ಒಮ್ಮೆಯಾದರು ಬಂದಿರುತ್ತೇನೆ ಅಥವಾ ಬರುವೆ.

ಇವಿಷ್ಟು ನನ್ನ ಕಿರು ಪರಿಚಯ ಉಳಿದದ್ದು ನಿಮ್ಮೊಳಗೆ ಸೇರಿದ ಮೇಲೆ ನನ್ನ ಆಕ್ರಮಣದ ಆಟ ಬಲ್ಲ ನೀವು ಹೇಳಬೇಕು.
ಹೊರ ಬಂದೆನಾ? ಅಲ್ಲೆ ಉಳಿದೆನಾ ಎಂದು.

ವಿನೋದ್ ಕುಮಾರ್.ಬಿ ✍











Leave a Reply

Your email address will not be published. Required fields are marked *