• Mon. Oct 21st, 2024

ಬದುಕು ಕಂಡಷ್ಟು

Byadmin

Jul 10, 2022

ಕಣ್ಣೇನೊ ಬಿಟ್ಟೆ.. ಮುಂದೇನು ..?ಯಾವುದು ಅರಿವಿಲ್ಲ..ಇನ್ನಷ್ಟೆ ಈ ಬದುಕು ಅಂತ ಹೊರಗೆ ಸಾವಿರ ಮಾತು.ಗಾಳಿಯಲ್ಲಿ ತೇಲಿ ಬಂದಿದ್ದು.
ಕಂಡಷ್ಟು ನೋಡ್ತೀನಿ ತಿಳಿದಷ್ಟು ತಿಳಿತೀನಿ.ಊರ ಉಸಾಬರಿ ನನಗೆ ಬೇಡ.. ನನ್ನದು ಅವರಿಗೆ ಬೇಡ.
ಅಂದ ಮೇಲೆ ಹೇಳೋಕೆನೈತೆ? ಬದುಕು ಮುಂದಿದೆ.

ಅವೆಲ್ಲದರ ಮಧ್ಯೆ ಸದಾ ನನ್ನೊಂದಿಗೆ ಮಾತಾಡೋ ಜೀವವೊಂದೈತೆ.. ನೀವು ಯಾವುದು ಅಂದ್ರೆ ನನ್ನ ಧ್ವನಿ ನಡುಗುತೈತೆ.ಅದರ ಬಗ್ಗೆ ಇಲ್ಲ ಸಲ್ಲದ ಗುಸು ಗುಸು ಹೊರಗಡೆ.ನಡಿ ಹೊರಗೆ ನಾನಿದೀನಲ್ಲ ಅನ್ನುವ ಅದೇ ಧ್ವನಿ ಆಗಾಗ ನಗಿಸುತೈತೆ. ರಾತ್ರಿ ,ಹಗಲು ಎಲ್ಲಾ ಒಂದೆ ಈ ಕಣ್ಣಿಗೆ, ಬದುಕಿಗೆ.
ಹೊರ ದಬ್ಬಿ ನಿಂದೆ ಬದ್ಕು..ಬದುಕಿ ತೋರಿಸು ಎನ್ನುವ ಧ್ವನಿ ಜೊತೆ ಐತೆ.ಇವೆಲ್ಲದರ ಮಧ್ಯೆ ಎರಡೊತ್ತುಣುವ ಬದುಕು ನಡಿತಿದೆ.ಯಾರ ಮುಂದೆಯು ಕೈ ಚಾಚದೆ.
ಬಿಚ್ಚಿಡೋಕೆ ಏನಿಲ್ಲ ಎಲ್ಲಾ ತೆರದಿಟ್ಟಿದ್ದೀನಿ..

ಕಲಿಸಿದ್ದು , ಕಲಿತದ್ದು ಎಲ್ಲಿ? ಎಂದು ?
ನಿಮಗೇನಾದರು ತಿಳಿದರೆ ಮೌನವಾಗ್ತೀರ..ಆಗ ನನ್ನ ಮಾಸಿದ ಬಟ್ಟೆ ನೋಡಿ, ಪ್ರೀತಿಗೆ ಹಾತೊರೆಯುವ
ಕಂಗಳು,ಸ್ವಾಭಿಮಾನ ತುಂಬಿದ ಕರುಳು ನಡೆದ ದಿನಗಳ ಕಥೆ ಹೇಳ್ತಾವೆ.. ಬದುಕು ಕಂಡಿದ್ದು..

ನನಗೆ ಬುದ್ದಿ ಬರುವ ಮೊದಲೆ ಪ್ರಪಂಚದ ಕಟ್ಟು ಪಾಡುಗಳಿಗೆ ನೊಂದು ಎದ್ದು ಹೊರಟ ನನ್ನವ್ವ ನನ್ನೊಳಗೆ ಉಳಿದು ನಿಮ್ಮನ್ನು ಮಾತಾಡಿಸ್ತಾಳೆ.
ಅಲ್ಲಲ್ಲಿ ನೊಂದುಕೊಳ್ತಾಳೆ ನನ್ನ ನಡಿಗೆ ಜೊತೆ ದೈಹಿಕವಾಗಿ ಇರಲಾಗದೆ, ನೋಡಲಾಗದೆ.
ಅದರ ಮಧ್ಯೆ ನನ್ನ ಸಮಾಧಾನಿಸಿ ಸ್ವಾಭಿಮಾನ ತುಂಬಿ ನಿಮ್ಮನ್ನು ಪ್ರಶ್ನಿಸುತ್ತಾಳೆ. ನಿಮ್ಮ ತ್ಯುಚ್ಛ ಮಾತುಗಳಿಗೆ ಬದುಕು ನೀವು ಕಂಡುಕೊಂಡ ರೀತಿಗೆ.

ಅವಳ ಅಮ್ಮ ಏನು ತಪ್ಪು ಮಾಡಿ ಹೆತ್ತು ಹೋದಳೊ ಅನ್ನುವ ಮಾತಿಗಿಂತ ‘ಅನಾಥ ಮಗು’ ಎಂದಾಗ ಅವ್ವ ಮತ್ತೆ ಅಲಬುತ್ತಾಳೆ..ಎದೆಗವುಚಿ ರಕ್ತ ಬಸಿದು ಹಾಲುಣಿಸಿದ ನನ್ನ ಅವ್ವ ಕುಗ್ಗುತ್ತಾಳೆ.ದೂರದಿಂದಲೆ ಸಂಸ್ಕಾರದ ಬದುಕು ದಕ್ಕಿಸಿ ಕೊಟ್ಟ ,ನೊಂದ್ಕೋಬೇಡ ಕಂದ ಎಂದು ನನ್ನ ಮೊಗದೊಳಗೆ ನಗುವಾದ
ನನ್ನ ಅವ್ವಳಿಗೆ ಶರಣು.

ಬದುಕು ಕಂಡಿದಿಷ್ಟು..ಉಳಿದದ್ದು…?
























Leave a Reply

Your email address will not be published. Required fields are marked *