• Mon. Oct 21st, 2024

ತನಿಖೆಯ ರೋಚಕ ಬದುಕು ಹೋರಾಟ

Byadmin

Jul 17, 2022


ಪತ್ರಕರ್ತರ ಏಳಿಗೆ,ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಹತ್ತಾರು ವರ್ಷಗಳಿಂದಿನಿಂದ ತುಡಿಯುತ್ತಿದ್ದ ಜೀವ ಮೊದಲು ಪ್ರಾರಂಭಿಸಿದ್ದು ‘ಕಣ್ಣು ಪತ್ರಿಕೆ’ ಹೋರಾಟ,ನ್ಯಾಯ, ಮುಖ್ಯ ಧ್ಯೇಯವಾಗಿಟ್ಟುಕೊಂಡಿದ್ದ ಪತ್ರಿಕೆ ನಂತರ ಅದರ ಗಡಿ ವಿಸ್ತಾರವಾಯಿತು.ಆಗ ಕಟ್ಟಿದ್ದು ರಾಜ್ಯ,ರಾಷ್ಟ್ರ,ಅಂತರಾಷ್ಟೀಯ ಮಟ್ಟದಲ್ಲಿ ಗುರುತಿಸುವಂತಹ ಪತ್ರಕರ್ತರ ಸಂಸ್ಥೆ ‘ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್’



ಏನಿದು ಪ್ರೆಸ್ ಕ್ಲಬ್?

ಪತ್ರಕರ್ತರು ಸಂಕಷ್ಟದಲ್ಲಿರುವಾಗ ಆರ್ಥಿಕ ನೆರವು,ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ
ನ್ಯಾಯಕ್ಕಾಗಿ ನಿರಂತರ ಹೋರಾಟ.ಹೀಗೆ ಇವರ ಯೋಚನೆಗಳು ಬಹಳ ಭಿನ್ನ..ಇಲ್ಲಿಯವರೆಗು ಯಾರೊಬ್ಬರು ಪತ್ರಕರ್ತರ ಬಗ್ಗೆ ಈ ರೀತಿ ಯೋಚಿಸಿ ಹೆಜ್ಜೆ ಇಟ್ಟ ಉದಾಹರಣೆ ನಮ್ಮ ಕಣ್ ಮುಂದೆ ಇಲ್ಲದಿರುವುದು ಅಷ್ಟೇ ದುರದೃಷ್ಟಕರ ಸತ್ಯ.
ನಿರಂತರವಾಗಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರೋಗ್ಯ ಶಿಬಿರ,ರಕ್ತದಾನ ಶಿಬಿರ, ಶಸ್ತ್ರ ಚಿಕಿತ್ಸೆಗಳಿಗೆ ಸಂಸ್ಥೆಯ ಮುಖೇನ ನೆರವು.
ಪತ್ರಕರ್ತರ ಮಕ್ಕಳಿಗೆ ಟ್ಯಾಬ್ ವಿತರಣೆ. ಹೀಗೆ ಅನೇಕ ಕಾರ್ಯಗಳು ಮುಂದುವರಿದಿದೆ.
ಇಷ್ಟೆಲ್ಲ ಹೇಳಿದ ಮೇಲೆ ಇದರ ಹಿಂದಿನ ವ್ಯಕ್ತಿಯ ಬಗ್ಗೆ ನೀವು ತಿಳಿಯಬೇಕು.ಹೆಸರು ಡಾ.ಟಿ.ಶಿವಕುಮಾರ್.

ಹುಟ್ಟು ನಾಗರನವಿಲೆ:

ಹಾಸನ ಜಿಲ್ಲೆಯ ನಾಗರ ನವಿಲೆ ಗ್ರಾಮದಲ್ಲಿ ಬಾಲ್ಯ, ಕೆಲವು ವರ್ಷ ಕುರಿ ಮೇಯಿಸುತ್ತ ಕಳೆದರು. ಓದಿನಲ್ಲಿ ಬಹಳ ಆಸಕ್ತಿ ಆದರೆ ಕೆಲಸ ಮಾಡಿದರೆ ಬದುಕು.
ಅವರ ಬದುಕಿನ ಪುಟ ಅವರ ಮಾತುಗಳಲ್ಲೆ ಕೇಳೋಣ.ನಾನು ಅಮ್ಮ, ನಮ್ಮಣ್ಣ ಎಲ್ಲಾ ಒಟ್ಟಿಗೆ ಇದ್ವಿ.
ಕಾಯಿ ಚೂರು ಮಾರಿ ಜೀವನ ಮಾಡ್ತ ಇದ್ವಿ.ನಾನು ಅಂಗಡಿಯಲ್ಲಿ ಕೂತು ನೀರು ಚಿಮುಕಿಸುತ್ತ ಬಂದವರಿಗೆ ಮಾರುತ್ತಿದ್ದೆ.ಅದು ಒಂದು ಪೈಸೆ ಒಂದು ಕಾಯಿ ಚೂರು.ಹೀಗಿರಬೇಕಾದರೆ
ಓದಿಸುತ್ತೀನಿ ಅಂತ ನನ್ನನ್ನು ಬೆಂಗಳೂರಿಗೆ
ಕರೆದೋಯ್ದ ಒಬ್ಬ ಯಜಮಾನ ಕೆಲಸಕ್ಕೆ ಕಳಿಸುತ್ತಾನೆ.ಅಲ್ಲಿಂದ ನನ್ನ ಬದುಕು ಘೋರ.

ಶಾಲೆ ಬಿಡಿಸಿ ಕೆಲಸಕ್ಕೆ ಕಳಿಸಿದ್ರು.ಪ್ರತಿಯೊಂದನ್ನು ಅವನಿಗೆ ಕೇಳಿ ಅವನ ಒಪ್ಪಿಗೆ ಪಡೆದೆ ಮಾಡಬೇಕಿತ್ತು.
ಇಂತಹ ಬಾಲ್ಯಗಳ ಮಧ್ಯೆ ನನಗೆ ದೊಡ್ಡ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ ಬಹಳವಾಗಿತ್ತು. ಹೀಗೆ ತನ್ನ ಬದುಕಿನ ಪುಟ ತೆರೆದಿಡುತ್ತ ಹೊರಟರು.

ನಮಗೆ ವಿಶೇಷ ಅನ್ನಿಸೋದು ಪೊಲೀಸ್ ಅಧಿಕಾರಿಗಳು ಶ್ರೀಯುತ ಡಾ. ಟಿ. ಶಿವಕುಮಾರ್ ಅವರನ್ನು ಬಳಸಿಕೊಂಡು ತನಿಖೆಗಳನ್ನು ನೆಡೆಸಿದ ಬದುಕಿನ ರೋಚಕತೆ.

ಮುಂದಿನ ವಾರ.

ಮುಂದುವರಿಯುವುದು.

ವಿನೋದ್ ಕುಮಾರ್.ಬಿ✍️










Leave a Reply

Your email address will not be published. Required fields are marked *