• Mon. Oct 21st, 2024

ತನಿಖೆಯ ರೋಚಕ ಬದುಕು ಹೋರಾಟ

Byadmin

Jul 24, 2022



ಅರ್ಧಕ್ಕೆ ನಿಂತ ಓದು.. ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ ಮಾಸಿರಲಿಲ್ಲ.
ಕೊನೆಗೆ ಪೊಲೀಸ್ ಅಧಿಕಾರಿಗಳು ಭೇಷ್ ಎಂದಿದ್ಯಾಕೆ?

ಕಳೆದ ಸಂಚಿಕೆ ಮುಂದುವರಿದ ಭಾಗ 2.

ಬಾಲ್ಯದಿಂದಲು ಹೊತ್ತಿಗೆ ಸರಿಯಾಗಿ ಊಟವಿಲ್ಲದ ಬದುಕು..ಹಸಿದ ಹೊಟ್ಟೆಯಲ್ಲಿ ಕಣ್ಣ್ ತುಂಬಾ ಕನಸ್ಸು ಕಟ್ಟಿಕೊಂಡು ಬದುಕಿನೆಡೆಗೆ ಹೆಜ್ಜೆ ಹಾಕಿದ ದಿನಗಳನ್ನು ಮರೆಯದೆ ಸ್ಮರಿಸಿಕೊಳ್ಳುವ ಗುಣ ಡಾ. ಟಿ. ಶಿವಕುಮಾರ್ ನಾಗರ ನವಿಲೆ ಅವರಲ್ಲಿ ಇರುವುದರಿಂದ ಈಗಲು ಇನ್ನು ಬಹಳ ದೂರ ಕ್ರಮಿಸುವಂತೆ ಮಾಡಿ ಮನಸ್ಸು ವಿಸ್ತಾರವಾಗುತ್ತ ಸಾಗಿದೆ.ಅವರ ಮಾತುಗಳಲ್ಲಿ ಕೇಳಿ..

ಕದ್ದು ಮುಚ್ಚಿ ಶಾಲೆಗೆ ಹೋಗುತ್ತಿದ್ದೆ..ನಾನು ಶಾಲೆಗೆ ಹೋಗಿರುವುದು ನನನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಯಜಮಾನರಿಗೆ ಗೊತ್ತಾದರೆ ಮುಗಿಯಿತು. ಶಾಲೆಯ ಹತ್ತಿರ ಬಂದು ಕರೆದೋಯ್ದು ಮನೆಯಲ್ಲಿ ಚಡಿ ಏಟು.ಅಷ್ಟೆಲ್ಲಾ ನನ್ನ ಓದದಂತೆ ತಡೆದರು ಓದು ನನ್ನೊಂದಿಗೆ ಜೊತೆಯಾಯಿತು.
ನಾನು ಶಾಲೆಗೆ ಹೋಗದೆ ನನ್ನ ಉಳಿದ ಸ್ನೇಹಿತರು ಬರೆದಿರುವ ಪುಸ್ತಕಗಳನ್ನು ಗೋಗರೆದು ಪಡೆದು ಓದಿಕೂಂಡು ಪರೀಕ್ಷೆ ಚೆನ್ನಾಗಿ ಬರೆಯುತ್ತಿದ್ದೆ.

ಬೆಂಗಳೂರಿನ ಲಕ್ಷ್ಮಿ ನಾರಾಯಣಪುರದಲ್ಲಿ ಹೀಗೆ ಕಣ್ಣೀರಿನ ನನ್ನ ಬಾಲ್ಯ ಕಣ್ಣ್ ತುಂಬಿತು.ಅದು ಎಷ್ಟರ ಮಟ್ಟಿಗೆಂದರೆ ನಾನೇನಾದರೂ ಮೂತ್ರಕ್ಕೆ ಒಂದೆರಡು ಬಾರಿ ಹೆಚ್ಚಿಗೆ ಹೋದರೆ ಮುಗಿಯಿತು..ಮಾರನೆಯ ದಿನ ನನ್ನ ಮೇಲೆಯೆ ನಿಗವಿಟ್ಟು ಶೌಚಾಲಯಕ್ಕೆ ಹೋಗದಂತೆ ತಡೆಯುತ್ತಿದ್ದ ಮನೆಯ ಯಜಮಾನ.ಬೆಳಗಿನ ಜಾವ ಐದು ಗಂಟೆಗೆಲ್ಲ ಹಾಸಿಗೆಯಿಂದ ಮೇಲೇಳ ಬೇಕಿತ್ತು.. ಇಲ್ಲ ಅಂದ್ರೆ ಮಲಗಿರುವಾಗಲೆ ನೀರು ಹಾಕುತ್ತಿದ್ದ.ಆಗ ನಾನು ಎದ್ದು ಹೋಗಿ ಕಾಯಿ ಅಂಗಡಿ ಬೀಗ ತೆಗೆದು ವ್ಯಾಪಾರಕ್ಕೆ ಕೂತರೆ. ರಾತ್ರಿ ಹತ್ತು ಗಂಟೆ ಆದರು ಮುಚ್ಚುವಂತಿಲ್ಲ.
ಬೆಳಗ್ಗೆ ಇಪ್ಪತೈದು ಕಾಯಿಗಳು ತುಂಬಿರುವ ಮಂಕರಿ ಎತ್ತಿ ಇಡುವಾಗ.ಶಾಲೆಗೆ ಅದೇ ದಾರಿಯಲ್ಲಿ ಹೋಗುವ ನನ್ನ ಸ್ನೇಹಿತರು ಕಾಯಿ ಚೂರು ಅಂತ ರೇಗಿಸಿಕೊಂಡು ಹೋಗೋವ್ರು..

ಕಾಯಿ ಚೂರು ಅಂದ ಹಲವರು ಬಾಯಿ ಮೇಲೆ ಬೆರಳು ಇಡುವಂತಾಯಿತು.

ಮುಂದುವರಿಯುವುದು..















Leave a Reply

Your email address will not be published. Required fields are marked *