• Mon. Oct 21st, 2024

ಯಾರಿಗಾದರೂ ಹೊಡೆಯಬಹುದು

Byadmin

Jul 31, 2022



ಭಾಷೆ, ಧರ್ಮಗಳ ವಿಚಾರ ಬಂದಾಗ ಅನ್ಯಾಯ ಸಹಿಸಿಕೊಳ್ಳದ ಜೀವಗಳು ಮುಷ್ಠಿ ಹಿಡಿದು ಬೀದಿಗೆ ಬಂದು ರಕ್ತ ಚೆಲ್ಲುವುದು ಸಾಮಾನ್ಯವಾಗಿ ಬಿಟ್ಟಿದೆ.
ನಡು ಬೀದಿಯಲ್ಲಿ ಜನ ಸಾಮಾನ್ಯರ ಎದುರು ಹಾಡ ಹಗಲೆ ಮಚ್ಚುಗಳಿಡಿದು ಜಳಪಿಸುವ ಕೋಮುವಾಧಿಗಳು, ಹಿಂಧು, ಮುಸಲ್ಮಾನ, ಕ್ರೈಸ್ತ ಯಾವುದೆ ಧರ್ಮದವರಾದರು ದ್ವೇಷದ ಹಗೆಗೆ ಜಾತಿ ವಿಷಯಕ್ಕೆ ಬಲಿಯಾಗುತ್ತಾರೆ.ಅಷ್ಟರ ಮಟ್ಟಿಗೆ ಕಾನೂನು ಭದ್ರವಾಗಿದೆಯೆಂದು ಸರ್ಕಾರ ಮತ್ತೊಮ್ಮೆ ನಿರೂಪಿಸಿದೆ.

ಶಿವಮೊಗ್ಗದ ಹರ್ಷನ ಕೊಲೆಯ ರಕ್ತದ ಕಲೆ ಇನ್ನು ಮಾಸಿಲ್ಲ. ಅಷ್ಟರಲ್ಲಿ ಮತ್ತೆರಡು ಕೊಲೆಗಳಾಗಿ ರಕ್ತ ಹೆಪ್ಪುಗಟ್ಟಿದೆ.
ಇನ್ನು ಹರ್ಷನ ಕೊಲೆಗೆ ಮೂಲ ಕಾರಣ ತಿಳಿದಾಗ ನಮ್ಮಲ್ಲಿನ ವ್ಯವಸ್ಥೆಯ ಬಗ್ಗೆ ಪ್ರಶ್ನಿಸುವುದು ಕೂಡ ಅಸಹ್ಯ.
ತನಿಖೆಯ ಮೂಲಗಳಿಂದ ನಂತರ ತಿಳಿದು ಬಂದ ಮಾಹಿತಿ ಒಬ್ಬ ಹೋರಾಟಗಾರನ ಕೊಲೆಯ ಮೂಲ ಜನರಿಗೆ ಭಯ ಹುಟ್ಟಿಸುವುದಾಗಿತ್ತು. ಸಮಾಜದಲ್ಲಿ ಕೋಮು, ಗಲಭೆ ಸೃಷ್ಟಿಸಿ ಸ್ವಾಸ್ತ್ಯವನ್ನು ಕದಡಿ ಜಾತಿ -ಧರ್ಮ ವೈಷಮ್ಯಕ್ಕೆ ದಾರಿ ಮಾಡಿಕೊಟ್ಟು ಒಂದು ಗುಂಪು ನೆಡೆಸಿದ ಕಗ್ಗೊಲೆ.

ಜನ ಸಾಮಾನ್ಯರಿಂದ ಆಯ್ಕೆಗೊಂಡ ಯಾವುದೇ ಸರ್ಕಾರ ಬಂದಾಗಲು ಕಠಿಣ ಶಿಕ್ಷೆ ನೀಡುವ ಕಾನೂನು ಬರದ ಹೊರತು ಇಂತಹ ಹೀನ, ತಲೆ ತಗ್ಗಿಸುವ ಕೃತ್ಯ ನಿತ್ಯ ಸುಪ್ರಭಾತದಂತೆ ನಮ್ಮೆದುರು ದರ್ಶನವಾಗುವುದು ತಪ್ಪಲ್ಲ.

ಇದರ ಮಧ್ಯೆ ಯೋಚಿಸದೆ ಮಾತನಾಡಿದ್ದೋ ಅಥವಾ ಮನಸ್ಸಿನಾಳದ ಮಾತೋ ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರು ನೀಡಿದ ಹೇಳಿಕೆ ಬಹಳ ಬೇಗನೆ ಚರ್ಚೆಯಾಗಿದ್ದಷ್ಟೆ ಅಲ್ಲದೆ. ಜನ ಸಾಮಾನ್ಯರಿಗೆಲ್ಲ ರಕ್ಷಣೆ ಕೊಡಲು ಆಗುತ್ತಾ? ಎನ್ನುವಾಗ ಎಲ್ಲರ ಬಾಯಿಗೆ ಆಹಾರವಾದರು.

ತಾಲಿಬಾನ್ ಹಾಗೂ ಪಾಕಿಸ್ಥಾನದಲ್ಲಿನ ಕಠಿಣ, ನೇಣು ಬಿಗಿಯುವ, ಗುಂಡಿಕ್ಕಿ ಕೊಲ್ಲುವ ಶಿಕ್ಷೆ ನಮ್ಮಲ್ಲಿಯೂ ಜಾರಿಗೆ ತರಲು ಸುಪ್ರೀಂ ಕೋರ್ಟ್ ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒತ್ತಡದ ಮನವಿ ಮಾಡುವ ಸಹೃದಯತೆ ಇನ್ನಾದರೂ ತೋರಲಿ. ಕೊಲೆ ಮಾಡಿ ರಾಜಾ ರೋಷವಾಗಿ ಹೊರ ಬಂದು ಪ್ರಭಾವಿ ರಾಜಕಾರಣಿಗಳ ಬೆಂಬಲ ಪಡೆಯುವ, ಬೆಂಬಲ ನೀಡುವ ವಲಸು ರಾಜಕಾರಣಿಗಳ ಆತ್ಮಕ್ಕೆ ಬಹಳ ಬೇಗನೆ ಶಾಂತಿ ಬಯಸೋಣ .ಇಂತಹ ವ್ಯವಸ್ಥೆಗಳ ಮಧ್ಯೆ ಉಸಿರಾಡುತ್ತಿರುವ ಮಕ್ಕಳನ್ನು ಕಳೆದುಕೊಂಡ ಹರ್ಷ, ಪ್ರವೀಣ್ ರಂತಹ ತಂದೆ,ತಾಯಂದಿರಿಗೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾದಾಗಲಷ್ಟೇ ಕೊಂಚ ನಿರಾಳ.

ಯಾರನಾದರು ಹೊಡೆಯಬಹುದೆಂದು ನಮ್ಮಲ್ಲಿನ ವ್ಯವಸ್ಥೆ ದಾರಿ ಮಾಡಿಕೊಟ್ಟಿದೆ.ಪುಡಿ ರೌಡಿಗಳೆಲ್ಲ ಬೀದಿಯಲ್ಲಿ ಮಚ್ಚಿಡಿದು,ಧರ್ಮ, ದ್ವೇಷದ ಜ್ವಾಲೆ ಹೊತ್ತಿಸಿ ಮೆರೆಯುತ್ತಿದ್ದಾರೆ..ಕಾನೂನು ಗಟ್ಟಿಯಾಗಲಿ..
ಬೀದಿ ಬದಿಯ ಕೊಲೆಗಳು ನಿಲ್ಲಲಿ ಎನ್ನುವುದು ಪತ್ರಿಕೆಯ ಆಶಯ.













Leave a Reply

Your email address will not be published. Required fields are marked *